ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ಮಹಿಳೆ..! | Mysuru
#PublicTV #Mysuru
ಸಂಗಮದ ತಪ್ಪಲಿನಲ್ಲಿ ಘೋರ ದುರಂತ ಸಂಭವಿಸಿದೆ. ಸೆಲ್ಫಿ ಹುಚ್ಚಿಗೆ ಮಹಿಳೆಯೊಬ್ಬರು ನೋಡನೋಡ್ತಿದ್ದಂತೆ ಕಪಿಲಾ ನದಿಯಲ್ಲಿ ಜಲಸಮಾಧಿಯಾಗಿದ್ದಾರೆ. ಕವಿತಾ ಎಂಬುವರು ಸೆಲ್ಫಿ ತೆಗೆದುಕೊಳ್ಳಲು ಹೋಗಿ, ನಂಜನಗೂಡು ತಾಲೂಕಿನ ಶ್ರೀ ಕ್ಷೇತ್ರ ಸಂಗಮದಲ್ಲಿ ಕಾಲುಜಾರಿ ಬಿದ್ದು ಜೀವ ಕಳೆದುಕೊಂಡಿದ್ದಾರೆ. ಕವಿತಾ ಮೈಸೂರಿನ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಾಗರಾಜ್ ಎಂಬುವರ ಪುತ್ರಿಯಾಗಿದ್ದಾರೆ. ಕುಟುಂಬದೊಂದಿಗೆ ಸಂಗಮದಲ್ಲಿ ಪೂಜೆ ಸಲ್ಲಿಸಲು ಹೋಗಿದ್ದ ವೇಳೆ ದುರಂತ ನಡೆದಿದೆ. ಘಟನೆ ಸಂಬಂಧ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
Watch Live Streaming On http://www.publictv.in/live